ಯೋಜನೆಗೆ ನೆರವಾಗಿ

ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಮಗ್ರವಾಗಿ ಅಡಿಗರನ್ನ ಅಂತರ್ಜಾಲ ಲೋಕದೊಳಗೆ ತರುವಲ್ಲಿ ನನ್ನೊಂದಿಗೆ ಹಲವರು ನೆರವಾಗಿದ್ದಾರೆ. ಈ ನೆರವು ಸಿಗದೇ ಹೋಗಿದ್ದರೆ ಇಷ್ಟರ ಮಟ್ಟಿಗಿನ ಕೆಲಸ ಸಾಧ್ಯವಾಗುತ್ತಿರಲಿಲ್ಲ.

ಒಂದು ಒಳ್ಳೆಯ ಕೈಂಕರ್ಯವನ್ನು ಮಾಡ ಹೊರಟಾಗ ನಮಗೆ ಗೊತ್ತಿಲ್ಲದೇ ಹಲವಾರು ಕೈಗಳು ನಮ್ಮ ಜೊತೆಯಾಗುತ್ತದೆ. ಒಬ್ಬನ ಕನಸು ಸಮುದಾಯದ ಕನಸಾಗುತ್ತದೆ. ನಿಮ್ಮಲ್ಲೂ ಹಲವರಿಗೆ ಇಂತಹ ಒಂದು ಯೋಜನೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ, ಉತ್ಸಾಹ ಇರಬಹುದು.

ಅಡಿಗರನ್ನು ಅಂಗಳಕ್ಕೆ ಕರೆತಂದಂತೆ ಇನ್ನಷ್ಟು ಕನ್ನಡದ ಸಾಹಿತಿಗಳನ್ನು ಅಂತರ್ಜಾಲದ ಅಂಗಳದೊಳಗೆ ತರುವ ಮಹತ್ವಾಕಾಂಕ್ಷೆ ನನಗೂ ಇದೆ. ಈ ಆಸೆ ಸಾಫಲ್ಯ ಪಡೆಯಬೇಕಾದರೆ ಸಮುದಾಯದ ಸಹಕಾರವೂ ಬೇಕಾಗುತ್ತದೆ. ಇಂತಹ ಒಂದು ಕಾರ್ಯಯೋಜನೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ಇದೋ ಇಲ್ಲಿದೆ ನಿಮಗೆ ನಮ್ಮ ಆಹ್ವಾನ..

ಹೇಗೆ ನೆರವಾಗಬಹುದು?

  •  ಈ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ಬರಹಗಳನ್ನು ಟೈಪಿಸುವ, ಅನುವಾದಿಸುವ ಕೆಲಸವಿರುತ್ತದೆ. ಬರವಣಿಗೆ ನಿಮ್ಮ ಇಷ್ಟದ ವಿಷಯವಾಗಿದ್ದರೆ, ನಿಮ್ಮ ಬರಹಗಳ ಮೂಲಕವೇ ನಮ್ಮ ಅಂಗಳಕ್ಕಿಳಿಯಬಹುದು.
  • ವಿಡಿಯೋಗ್ರಫ್ಹಿ, ಎಡಿಟಿಂಗ್ ನಲ್ಲಿ ನೀವು ನಿಪುಣರಾಗಿದ್ದರೆ, ನಿಮ್ಮ ಕೌಶಲ್ಯದ ನೆರವು ನಮಗೆ ಬೇಕು.
  • ಕನ್ನಡ ಸಾರಸ್ವತ ಬಳಗ ಬಹು ದೊಡ್ಡದು. ಇನ್ನೂ ಮುಖ್ಯವಾಹಿನಿಗೆ ಬರದ ಸಾಕಷ್ಟು ಸಾಹಿತಿಗಳು ನಮ್ಮಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಒಂದೊಂದು ಅಂಗಳ ಸಿದ್ಧಪಡಿಸಲು ನಿಮ್ಮ ಸಮಯ, ಶ್ರಮವನ್ನ ಈ ಯೋಜನೆಗೆ ಮೀಸಲಿಡುವ ಮೂಲಕ ನಮಗೆ ನೆರವಾಗಬಹುದು.
  • ಹಣ ಎಲ್ಲದಕ್ಕಿಂತ ದೊಡ್ಡದಲ್ಲ; ಆದರೇ ಹಣವಿರದೇ ಇಂತಹ ಕನಸುಗಳು ಈಡೇರುವುದು ಕಷ್ಟಸಾಧ್ಯ. ಹೆಜ್ಜೆ ಹೆಜ್ಜೆಗೂ ಖರ್ಚಿನ ಬಾಬತ್ತಿರುವ ಈ ದುಬಾರಿ ದುನಿಯಾದಲ್ಲಿ ಧನ ಸಹಾಯವನ್ನೂ ನಾವು ಅಪೇಕ್ಷಿಸುತ್ತೇವೆ. ಸಂದರ್ಶನಗಳನ್ನು ಚಿತ್ರಿಕರಿಸಲು, ಪ್ರಯಾಣಕ್ಕೆ, ಆಕಾಶವಾಣಿ , ದೂರದರ್ಶನ ಸೇರಿದಂತೆ ಹಲವೆಡೆ ಸಂಗ್ರಹಿತವಾಗಿರುವ ಅಮೂಲ್ಯ ದೃಶ್ಯ-ಶ್ರಾವ್ಯ ವನ್ನು ಹೊರ ತೆಗೆಸಲು, ಹೀಗೆ ಪ್ರತಿಯೊಂದಕ್ಕೂ ಹಣದ ಅಗತ್ಯವಿದೆ. ಹೀಗಾಗಿ ಆರ್ಥಿಕವಾಗಿಯೂ ನೀವು ನಮಗೆ ನೆರವಾಗಬಹುದು.
  • ನಿಮಗೆ ಯಾವುದೇ ಮೂಲಗಳಿಂದ ಅಡಿಗರಿಗೆ ಸಂಬಂಧಿಸಿದ ಮಾಹಿತಿ , ವಸ್ತು ಲಭ್ಯವಾದಲ್ಲಿ ಅಥವಾ ಸಲಹೆಗಳಿದ್ದರೆ ಅದನ್ನು angala.sankathana@gmail.com ಗೆ ಈಮೇಲ್ ಮಾಡಿ

– ಅನೇಕ

ಈ ಯೋಜನೆಗೆ ನೆರವಾಗಿ


ಸಂಗ್ರಹ :

ನಾಗರಾಜ ವಸ್ತಾರೆ – ರೂ. 5,000
ಗುರುರಾಜ ನಾರಾಯಣ ಮೂರ್ತಿ – ರೂ. 3,000
ಶ್ರೀಕಾಂತ ಪ್ರಸಾದ್ – ರೂ. 500
ಚಿನ್ಮಯ್ ಭಟ್ – ರೂ. 1000
ವಿದ್ಯಾ ಅಡಿಗ – ರೂ. 6,000


ವ್ಯಯ :

ಕೆ ಜಿ ಸೋಮಶೇಖರ್ , ಫೋಟೋಗಳು – ರೂ. 3,000
ಮಿಂದಾಣ ನಿರ್ವಹಣೆ (ವಿನ್ಯಾಸ ವೆಚ್ಚ ಹೊರತುಪಡಿಸಿ , ಅಂತರ್ಜಾಲದ ಸ್ಥಳಾವಕಾಶಕ್ಕಾಗಿ) – ರೂ. 3,500